
The Agastya Creativity Campus in Kuppam had a special visitor in early October in the form of math teacher Mr Yakub Koyyur. We are immensely proud that the drop-in inspired the Recipient of the National Award by the Govt. of India (2020) and brought him joy. Here’s his feedback from the weekend trip (translation provided after original text)
ಜಗತ್ತಿನ ಜಂಜಾಟಗಳಾಚೆ ಎರಡು ದಿನ.ಮನಸ್ಸಲ್ಲಿ ಬಹಳಷ್ಟು ಆಸೆ. ಅಗಸ್ತ್ಯ ತಂಡದ ಕ್ಯಾಂಪಸ್ ಕುಪ್ಪಂ ನೋಡಬೇಕೆಂದು. ಎರಡು ಮೂರು ಬಾರಿ ಆಹ್ವಾನವೂ ಬಂದಿತ್ತು. ಅಗಸ್ತ್ ಫೌಂಡೇಶನ್ ದೇಶದ 21ರಾಜ್ಯಗಳಲ್ಲಿ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಅನ್ವೇಷಣೆ,ನಾವಿನ್ಯತೆಗಳಿಗೆ ಪ್ರಾಧಾನ್ಯತೆ ಕೊಡುತ್ತಿರುವ ಅಗಸ್ತ್ಯ ಫೌಂಡೇಶನ್ ನನ್ನ ಸ್ವೀಕರಿಸುವಂತೆ ಮಾಡಿರುವುದು ನನ್ನ ಕನಸಿನ ಲೋಕ “ Maths World”.
ಕೊನೆಗೂ ಭೇಟಿ ನೀಡುವ ಸಂದರ್ಭ, ಸಮಯ ಒದಗಿ ಬಂತು. ಎರಡು ದಿನ ಕ್ಯಾಂಪಸ್ ಒಳಗೆ ಸುತ್ತಾಡಿದೆ. ನನಗೆ ಅಗಸ್ತ್ಯ ಕ್ಯಾಂಪಸ್ ಇನ್ನೊಂದು ಜಗತ್ತಿನ ಪರಿಚಯ ಮಾಡಿಸಿತು. ಅದೊಂದು ಸುಂದರ ತಾಣ. ಕಲಿಕೆಗೆ ವಯಸ್ಸು, ಜಾತಿ, ಧರ್ಮ, ಬಣ್ಣ ಇವ್ಯಾವುದೂ ಅಡ್ಡಿಯಾಗದು. ಕ್ಯಾಂಪಸ್ ಒಳಗೆ ನಾನು ಬಾಹ್ಯ ಜಗತ್ತನ್ನು ಸಂಪೂರ್ಣ ಮರೆತಿದ್ದೆ. ಅಲ್ಲಿ ಜ್ಞಾನ ಮಾತ್ರ ಕಣ್ಣ ಮುಂದೆ. ಅದನ್ನು ಪಡೆಯಲು ಎಲ್ಲಾ ಬಗೆಯ ವೇದಿಕೆಗಳು.
ಅಗಸ್ತ್ಯ ಫೌಂಡೇಶನ್ ಕ್ಯಾಂಪಸ್ ಚೆನ್ನಾಗಿ ಇರುತ್ತದೆ ಎಂದುಕೊಂಡಿದ್ದೆ, ಇಲ್ಲಿಗೆ ಬಂದಾಗ ಗೊತ್ತಾಯಿತು ಇಲ್ಲಿನ ಜನರು ಚೆನ್ನಾಗಿದ್ದರೆ ಎಂದು.
ನನ್ನನ ಆತ್ಮೀಯವಾಗಿ ನೋಡಿಕೊಂಡ Agastya Acharya Initiative ಟೀಮ್ ನವರಿಗೆ ತುಂಬು ಹೃದಯದ ಧನ್ಯವಾದಗಳು.

Translation
Two days in a Dream World
I desired to visit the Agastya Campus near Kuppam for three years. I was thrilled when I got the invite from Agastya’s Teacher Development Team. I was doubly happy because Agastya Foundation, which is known for bringing innovations and new ideas in the field of education, recognized and appreciated my ‘Math World’ and extended the invitation, so I decided to go.
Agastya campus took me to another world. It is a beautiful place where learning becomes joy, and caste, creed, age, and gender are no barriers. Every lab and every corner of the campus offered an opportunity to learn and think creatively.
Spending two full days, I realized that not only is the campus beautiful, but also the people in Agastya are beautiful; they are honest and passionate.